ಐದು ಸಂಸ್ಕೃತ ನಾಟಕಗಳು

₹350.00

SKU: 208 Category:
ಲೋಕಶಾಕುಂತಲ, ವಿದಿಶೆಯ ವಿದೂಷಕ, ಚಾಣಕ್ಯ ಪ್ರಪಂಚ,ಭಗವದಜ್ಜುಕೀಯಮ್, ಸೂಳೆ-ಸನ್ಯಾಸಿ

ಕೆ.ವಿ. ಸುಬ್ಬಣ್ಣನವರು ಮರುರೂಪಿಸಿದ ಐದು ಸಂಸ್ಕ ತ ನಾಟಕಗಳ ಕನ್ನಡ ಆವೃತ್ತಿಗಳು ಇಲ್ಲಿ ಸಂಕಲಿತಗೊಂಡಿವೆ. ಕಾಳಿದಾಸನ `ಅಭಿಜ್ಞಾನ ಶಾಕುಂತಲಮ್' ಆಧರಿಸಿದ `ಲೋಕಶಾಕುಂತಲ' (೧೯೯೦), `ಮಾಲವಿಕಾಗ್ನಿಮಿತ್ರ' ಆಧರಿಸಿದ `ವಿದಿಶೆಯ ವಿದೂಷಕ' (೧೯೯೩), ವಿಶಾಖದತ್ತನ `ಮುದ್ರಾರಾಕ್ಷಸ' ಆಧರಿಸಿದ `ಚಾಣಕ್ಯ ಪ್ರಪಂಚ', ಮತ್ತು ಬೋಧಾಯನ ಅಥವಾ ಮಹೇಂದ್ರವಿಕ್ರಮವರ್ಮನ `ಭಗವದಜ್ಜುಕೀಯಮ್'ದ ಅನುವಾದ ಮತ್ತು ಅದೇ ಕೃತಿಯ `ಸೂಳೆ-ಸನ್ಯಾಸಿ' (೧೯೭೭) ಎಂಬ ರೂಪಾಂತರ.ಇವುಗಳಲ್ಲಿ ನಾಲ್ಕು ಹಿಂದೆ ಪ್ರಕಟಗೊಂಡಿದ್ದು ಈಗ ಲಭ್ಯ ವಿರಲಿಲ್ಲ; ಇನ್ನು ಉಳಿದ ಒಂದು ೧೯೮೮ರಲ್ಲೇ ರಚಿತವಾಗಿದ್ದರೂ ಈವರೆಗೂ ಹಸ್ತಪ್ರತಿಯ ರೂಪದಲ್ಲೇ ಉಳಿದಿತ್ತು. ಸಾಹಿತ್ಯಾಸಕ್ತರಿಗೂ ರಂಗಸಹೃದಯರಿಗೂ ಒಟ್ಟಿಗೆ ಸಿಗಲೆಂಬ ಇರಾದೆಯಿಂದ ಈ ಬಗೆಯ ಸಂಕಲನದಲ್ಲಿ ಈ ಕೃತಿಗಳು ಹೊರಬರುತ್ತಿವೆ.ಈ ಎಲ್ಲ ಅನುವಾದ/ರೂಪಾಂತರಗಳೂ ನಡೆದಿದ್ದು ನಿರ್ದಿಷ್ಟ ರಂಗಪ್ರಯೋಗಗಳ ಅಗತ್ಯಕ್ಕಾಗಿ. ಮತ್ತು, ಇವೆಲ್ಲವೂ ಮೂಲವನ್ನಾಧರಿಸಿ ಕಟ್ಟಿರುವ ಮರುರೂಪಗಳೇ ಹೊರತು ನೇರ ಅನುವಾದಗಳಲ್ಲ. ಸಂಸ್ಕ ತ ಸಾಹಿತ್ಯದ ಮೇರುಕೃತಿಗಳನ್ನು ಕನ್ನಡದ/ಭಾರತದ ಸಮಕಾಲೀನ ಬೌದ್ಧಿಕ ಸಂದರ್ಭಗಳಿಗೆ ಸಂವಾದಿಯಾಗುವಂತೆ ಹೊಸ ರೂಪಗಳಲ್ಲಿ ಇಟ್ಟು ನೋಡುವ ಪ್ರಯೋಗವು ಈ ಎಲ್ಲ ರೂಪಾಂತರಗಳ ಸ್ಥಾಯೀಗುಣ.

Additional information

Number of pages

344

Year of Publication

2020

Author

ಕೆ.ವಿ. ಸುಬ್ಬಣ್ಣ

Reviews

There are no reviews yet.

Be the first to review “ಐದು ಸಂಸ್ಕೃತ ನಾಟಕಗಳು”

Your email address will not be published. Required fields are marked *