ಕುವೆಂಪು ಅವರ ಕಾದಂಬರಿಗಳ ದಟ್ಟಲೋಕದೊಳಕ್ಕೆ ನಮ್ಮನ್ನು ಕೊಂಡೊಯ್ಯುವ ಟಿ.ಪಿ. ಅಶೋಕ ಅವರ ಈ ವಿಮರ್ಶಾಕೃತಿಯು ಆ ಕಾದಂಬರಿಗಳ ಸೂಕ್ಷ್ಮವಿವರಗಳನ್ನು ನಮಗೆ ಪರಿಚಯಿಸಿ, ಆ ಮೂಲಕ ಕುವೆಂಪು ಕಾಣ್ಕೆಯ ಒಳಗೇ ಇರುವ ವೈಶಿಷ್ಟ್ಯ-ವೈವಿಧ್ಯಗಳನ್ನು ತೆರೆಸಿಕೊಡುತ್ತದೆ. ಚೇತನವು ಅನಿಕೇತನವಾಗಬೇಕೆಮ್ದು ಹಂಬಲಿಸಿದ ಕವಿ ಕುವೆಂಪು ಹೇಗೆ ತಮ್ಮ ಕಾದಂಬರಿಗಳಲ್ಲಿ ತತ್ಕಾಲೀನ ಲೌಕಿಕ ಬದುಕಿನ ವಿವರಗಳನ್ನು ದೇಶಸ್ಥ-ಕಾಲಸ್ಥ ನೆಲೆಗಳಲ್ಲಿ ದಾಖಲಿಸುತ್ತಾರೆ; ಹೇಗೆ ಅವರ ಪಾತ್ರಗಳು ಏಕಕಾಲದಲ್ಲಿ ನಿಜವ್ಯಕ್ತಿಗಳಾಗಿಯೂ ರೂಪಕಗಳಾಗಿಯೂ ಒಡಮೂಡಿಕೊಳ್ಳುತ್ತವೆ- ಇಂಥ ಹಲವಾರು ಸಾಂಸ್ಕೃತಿಕ ಪ್ರಶ್ನೆಗಳನ್ನು ಆರಂಭಿಕ ಓದುಗ-ವಿದ್ವದ್ವಿಮರ್ಶಕರಿಬ್ಬರಿಗೂ ಉಪಯುಕ್ತವೆನ್ನಿಸುವಂತೆ ಚರ್ಚಿಸುವ ಸಮರ್ಥ ವಿಮರ್ಶೆ ಇಲ್ಲಿದೆ.
Additional information
| Number of pages | 72 |
|---|---|
| Year of Publication | 1st Edition- 2004, 2nd Edition- 2011 |
| Author | ಟಿ.ಪಿ. ಅಶೋಕ |
| eBook |





Reviews
There are no reviews yet.