ಪ್ರಸ್ತುತ ಸಂಕಲನದ ಎಲ್ಲಾ ಕತೆಗಳೂ ಟಾಲ್‌ಸ್ಟಾಯ್‌ಯವರ ದ್ವಿತೀಯಾರ್ಧದ ಬರವಣಿಗೆಯನ್ನು ಪ್ರತಿನಿಧಿಸುವ ಕೆಲವು ಮುಖ್ಯ ನಿದರ್ಶನಗಳು. ಈ ಕತೆಗಳಲ್ಲಿ ಪ್ರಜ್ಞಾಪೂರ್ವಕ ಕಲೆಗಾರಿಕೆಯಾಗಲೀ ಕುಸುರಿ ಕೆಲಸದ ಕಸುಬುಗಾರಿಕೆಯಾಗಲೀ ಕಂಡುಬರುವುದಿಲ್ಲ. ಹಿರಿಯನೊಬ್ಬ ತನ್ನ ಮಕ್ಕಳು, ಮೊಮ್ಮಕ್ಕಳು, ಬಂಧು ಬಾಂಧವರು, ನೆರೆ ಹೊರೆಯವರೊಂದಿಗೆ ಹಂಚಿಕೊಂಡ ಅನುಭವ ಕಥನಗಳಂತಿರುವ ಈ ಬರಹಗಳು ತಮ್ಮ ಸರಳತೆ ಮತ್ತು ಸಹಜತೆಗಳಿಂದಾಗಿ ಮನಮುಟ್ಟುತ್ತವೆ. ಅಪಾರ ಜೀವನಾನುಭವದಿಂದ ಮೂಡಿಬಂದ ವಿವೇಕ ಈ ಕತೆಗಳ ರೂಪದಲ್ಲಿ ನಿರೂಪಣೆಗೆ ಒಳಗಾಗಿದೆ ಎನಿಸುತ್ತದೆ...
ಈ ಎಲ್ಲ ಕತೆಗಳ ಕೇಂದ್ರದಲ್ಲಿರುವುದು ಸಾಮಾನ್ಯ ರಷ್ಯನ್ನರು. ಅವರ ಬದುಕಿನ ಸುತ್ತ ಹೆಣೆದ ದೃಷ್ಟಾಂತಗಳಂತಿರುವ ಈ ಕತೆಗಳು ಮೇಲುನೋಟಕ್ಕೆ ಸರಳವೆನಿಸಿದರೂ ಬದುಕನ್ನು ಕುರಿತು ಅನೇಕ ಮೂಲಭೂತವಾದ ತಾತ್ತ್ವಿಕ ಪ್ರಶ್ನೆಗಳ ಚಿಂತನ ಮಂಥನವನ್ನು ನಡೆಸುತ್ತವೆ...
ಟಿ.ಪಿ. ಅಶೋಕ
(ಮುನ್ನುಡಿಯಿಂದ)
Additional information
| Number of pages | 120 |
|---|---|
| Year of Publication | 1st Edition- 2009, 2nd Edition- 2021 |
| Author | ಮಾಧವ ಚಿಪ್ಪಳಿ |
| eBook | https://play.google.com/store/books/details/Leo_Tolstoy_Aaru_Tolstoy_Kathegalu?id=PPMxEAAAQBAJ |





Reviews
There are no reviews yet.