ಚೀನಾದ ಪ್ರಾಚೀನ ದರ್ಶನಗಳಲ್ಲಿ ಮುಖ್ಯವಾದ ಎರಡು - ಕನ್‌ಫ್ಯೂಷಿಯಸ್ ಚಿಂತನೆ ಮತ್ತು ದಾವ್. ಕನ್‌ಫ್ಯೂಷಿಯಸ್‌ನ ಚಿಂತನೆಯು ವ್ಯವಸ್ಥೆಯನ್ನು ಮುಖ್ಯವೆಂದು ಭಾವಿಸುವಂಥದಾದರೆ, ದಾವ್ ಮೇಲ್ನೋಟಕ್ಕೆ ಅದಕ್ಕೆ ವಿರುದ್ಧಮುಖಿ. ಆದರೆ ದಾವ್ ಲೌಕಿಕಕ್ಕೆ ಕಣ್ಣುಮುಚ್ಚಿದ ದರ್ಶನವೂ ಅಲ್ಲ; ಅದು ಲೌಕಿಕ-ಅಲೌಕಿಕಗಳೆರಡನ್ನೂ ಒಟ್ಟಾಗಿ ಗ್ರಹಿಸುವ ಭಿನ್ನವಾದೊಂದು ಕ್ರಮ. ಅಂಥ ಕ್ರಮದ ಹೊಳಹನ್ನು ಕೊಡುವ ಪ್ರಮುಖ ಕೃತಿ - ‘ದಾವ್ ದ ಜಿಂಗ್’.
ಲೌಕಿಕವನ್ನು ಏಕಮುಖಿಯಾಗಿ ಮಾತ್ರ ಗ್ರಹಿಸುವ ರೂಢಿಯನ್ನು ಪೋಷಿಸಿ ಬೆಳೆಸಿಕೊಂಡಿರುವ ಇವತ್ತಿನ ಕಾಲಕ್ಕೆ ದಾವ್ ಅಭ್ಯಾಸವು ಚಿಕಿತ್ಸಕವಾಗಬಲ್ಲುದು - ಎಂಬ ನಂಬಿಕೆಯಿಂದ ಕನ್ನಡದ ಮಖ್ಯ ಚಿಂತಕ-ಲೇಖಕ ಯು.ಆರ್. ಅನಂತಮೂರ್ತಿ ‘ದಾವ್ ದ ಜಿಂಗ್’ನ ಪ್ರಸ್ತುತ ಕನ್ನಡಾನುವಾದವನ್ನು ನಮ್ಮ ಮುಂದಿರಿಸಿದ್ದಾರೆ.
Additional information
| Number of pages | 144 |
|---|---|
| Year of Publication | 1st Edition- 1994, 3rd Edition- 2021 |
| Author | ಯು.ಆರ್. ಅನಂತಮೂರ್ತಿ |
| eBook | https://play.google.com/store/books/details/Dow_Deh_Jing?id=Nr3yDwAAQBAJ |





Reviews
There are no reviews yet.