ರೊದ್ದಂ ನರಸಿಂಹ ಅವರ ಆಯ್ದ ಬರಹಗಳ ಅನುವಾದ
ಇಲ್ಲಿರುವ ರೊದ್ದಂ ನರಸಿಂಹ ಅವರ ಮೂರು ಲೇಖನಗಳು ವಿಜ್ಞಾನ ಮತ್ತು
ಸಂಸ್ಕೃತಿಯ ತೌಲನಿಕ ಸಂಬಂಧ ಕುರಿತ ಬರಹಗಳಲ್ಲ; ಇವು ವಿಜ್ಞಾನದೊಳಗೇ ಅಂತರ್ಗತವಾಗಿರುವ
‘ಸಂಸ್ಕೃತಿಗಳನ್ನೂ’ ವಿಜ್ಞಾನ-ನಾಗರಿಕತೆ-ಇತಿಹಾಸ-ಸಂಸ್ಕೃತಿ - ಇವುಗಳ ಹಿಂದಿರುವ ವಿಶಾಲ
ಭಿತ್ತಿಯನ್ನೂ ಅನಾವರಣಗೊಳಿಸುವ ಆಕಾಂಕ್ಷೆಯಿಂದ ಉದ್ಯುಕ್ತವಾಗಿವೆ. ಬೇರೆಬೇರೆ
ಸಂಸ್ಕೃತಿಗಳು ಯಾಕೆ ವಿಭಿನ್ನ ರೀತಿಯ ವಿಜ್ಞಾನಗಳನ್ನು ರೂಪಿಸಿಕೊಂಡಿವೆ? ಭಾರತದಲ್ಲಿ
ಆಧುನಿಕ ವಿಜ್ಞಾನವು ಯಾಕೆ ಬೆಳೆದುಕೊಳ್ಳಲಿಲ್ಲ? - ಎಂಬಿತ್ಯಾದಿ ಪ್ರಶ್ನೆಗಳಿಗೆ
ಸಾಂಪ್ರದಾಯಿಕವಾಗಿ ಕೊಡಲಾಗುವ ಕಾರಣಗಳನ್ನು ಬದಿಗಿಟ್ಟು, ಜ್ಞಾನಶಾಸ್ತ್ರೀಯ ನೆಲೆಯಿಂದ,
ಸೌಂದರ್ಯ ಮೀಮಾಂಸೆ ಎನ್ನಬಹುದಾದ ನೆಲೆಯಿಂದ, ಉತ್ತರಗಳನ್ನು ಹುಡುಕುವುದು ಈ ಬರಹಗಳ
ವಿಶೇಷ. ಈ ಕಾರಣದಿಂದಲೇ ಈ ಬರಹಗಳು ಸಾದಾ ವಿಜ್ಞಾನ ಲೇಖನಗಳಾಗದೆ ಬೌದ್ಧಿಕ
ಚಿಂತನೇತಿಹಾಸದ ರೋಚಕ ಯಾತ್ರೆಯೂ ಆಗುತ್ತವೆ.
Additional information
| Number of pages | 104 |
|---|---|
| Year of Publication | 1st Edition- 2005. 2nd Edition- 2021 |
| Author | ರೊದ್ದಂ ನರಸಿಂಹ |
| Translator / Editor | ಅಕ್ಷರ ಕೆ.ವಿ. |
| eBook | https://play.google.com/store/books/details/Roddam_Narasimha_Vijnaana_Samskriti?id=xWn2DwAAQBAJ |





Reviews
There are no reviews yet.