ಕನ್ನಡ ಭಾಷೆಯು ತನ್ನ ಸಾಹಿತ್ಯವನ್ನು ನಿರ್ಮಿಸಿಕೊಂಡ ಆದಿಕಾಲವನ್ನು ಕೇಂದ್ರವಾಗಿಟ್ಟುಕೊಂಡಿರುವ ಪ್ರಸ್ತುತ ಪುಸ್ತಕದ ಎರಡು ಲೇಖನಗಳು `ದೇಶಭಾಷಾ ನಿರ್ಮಾಣ'ವೆಂಬ ಪ್ರಕ್ರಿಯೆಯನ್ನು ಕುರಿತು ಹೊಸ ಸಿದ್ಧಾಂತನಿರ್ಮಾಣಕ್ಕೆ ತೊಡಗುತ್ತವೆ. ಜತೆಗೆ, ಈ ಕಾಲದ ಕನ್ನಡಕ್ಕೂ ಮತ್ತು ಅದಕ್ಕೆ ಭಿತ್ತಿಯನ್ನು ಒದಗಿಸಿಕೊಟ್ಟ ವಿಶ್ವಾತ್ಮಕ ವ್ಯಾಪ್ತಿಯ ಸಂಸ್ಕ ತಕ್ಕೂ ನಡುವಿನ ಸಂಬಂಧಗಳು ಏನು, ಅವೆರಡು ಭಾಷೆಗಳ ನಡುವಣ ವ್ಯವಹಾರಗಳು ಯಾವ ಮಾದರಿಯವು -- ಮೊದಲಾದ ಪ್ರಶ್ನೆಗಳನ್ನೂ ಈ ಲೇಖನಗಳು ತುಂಬ ಹೊಸ ಬೆಳಕಿನಲ್ಲಿ ಕಾಣಲು ಪ್ರಯತ್ನಿಸಿವೆ. ಹಾಗೂ ಈ ಎಲ್ಲ ಚರ್ಚೆಗಳ ಮೂಲಕ ಇವತ್ತು ಎದುರಾಗಿರುವ ಜಾಗತೀಕರಣವೆಂಬ ವಿದ್ಯಮಾನಕ್ಕೂ ನಾವು ತುಂಬ ಹೊಸದೇ ಆದ ನೆಲೆಯಲ್ಲಿ ಪ್ರತಿಸ್ಪಂದಿಸುವುದು ಸಾಧ್ಯವೆ -- ಎಂಬುದನ್ನು ಪರೋಕ್ಷವಾಗಿ ಪರಿಶೀಲಿಸುವ ಒಂದು ಮಹತ್ತ್ವಾಕಾಂಕ್ಷೆಯೂ ಕೂಡಾ ಈ ಎರಡು ಲೇಖನಗಳ ಹಿನ್ನೆಲೆಯಲ್ಲಿ ಅಡಕವಾಗಿದೆ.
Additional information
| Number of pages | 176 |
|---|---|
| Year of Publication | 1st Edition- 2003, 2nd Edition- 2015 |
| Author | ಷೆಲ್ಡನ್ ಪೋಲಾಕ್ |
| Translator / Editor | ಅಕ್ಷರ ಕೆ.ವಿ. |
| eBook | https://play.google.com/store/books/details/Sheldon_Pollock_Vishwaatmaka_Deshabhashe?id=fGPvDwAAQBAJ |





Reviews
There are no reviews yet.