ರಂಗಪ್ರಪಂಚ

500.00

SKU: 151 Category:

ನಾಗರಿಕಪೂರ್ವ ಯುಗದಿಂದ ಆರಂಭಿಸಿ, ಸಮಕಾಲೀನ ರಂಗಭೂಮಿಯವರೆಗೆ; ಅಮೆರಿಕಾದಿಂದ ಆರಂಭಿಸಿ ಚೀನಾ-ಜಪಾನುಗಳವರೆಗೆ; ಪ್ರಪಂಚದ ವಿವಿಧ ಕಾಲ-ದೇಶಗಳ ರಂಗಸಾಧನೆಗಳನ್ನು ಪರಿಚಯಿಸುವ ಪ್ರಯತ್ನ -- ರಂಗಪ್ರಪಂಚ.  ಆಸಕ್ತ ಓದುಗ ಮತ್ತು ಅಭ್ಯಾಸಾಕಾಂಕ್ಷಿ ವಿದ್ಯಾರ್ಥಿ -- ಇಬ್ಬರನ್ನೂ ಗಮನದಲ್ಲಿಟ್ಟುಕೊಂಡು ರಚಿತವಾದ ಈ ಪುಸಕದಲ್ಲಿ ಪ್ರತಿಯೊಂದು ರಂಗಭೂಮಿಯ ಉದ್ದೇಶ, ಸಂದರ್ಭ, ರಂಗಮಂದಿರ, ರಂಗಸಜ್ಜಿಕೆ, ಸಂಘಟನೆ, ಅಭಿನಯ, ರಂಗತಂತ್ರಗಳು, ಮೀಮಾಂಸೆ ಮತ್ತು ನಾಟಕಸಾಹಿತ್ಯ -- ಈ ಎಲ್ಲ ವಿಷಯಗಳನ್ನು ಪರಿಚಯಿಸುವ ಜತೆಗೆ ಆಯಾ  ರಂಗಭೂಮಿಯನ್ನು ಅದರ ಸಾಮಾಜಿಕ-ಸಾಂಸ್ಕ ತಿಕ ಹಿನ್ನೆಲೆಯಲ್ಲಿ ಕೂರಿಸುವ ಪ್ರಯತ್ನವನ್ನೂ ಮಾಡಲಾಗಿದೆ.

... ರಂಗಪ್ರಪಂಚ ತನ್ನ ಗುರಿ ಸಾಧಿಸಿದೆ.  ಕನ್ನಡದ ವಿಚಾರವಂತ ಸಾಮಾನ್ಯ ಓದುಗನಿಗೋ ವಿದ್ಯಾರ್ಥಿಗೋ ಎಷ್ಟು ಬೇಕೋ ಅಷ್ಟನ್ನೇ ಇಲ್ಲಿ ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.  ರಂಗಕರ್ಮಿಗಳಿಗಂತೂ ಇದೊಂದು ರನ್ನಭಂಡಾರವೇ ಆಗಿದೆ.  ಇದೀಗ ಹಳ್ಳಿಪಳ್ಳಿಗಳಲ್ಲಿಯೂ ಆ ಬೀದರಿನಿಂದ ಈ ಸುಳ್ಯದವರೆಗೂ ರಂಗೋತ್ಸಾಹಿಗಳು ತುಂಬಿ ತುಳುಕುತ್ತಿರುವಾಗ ಅವರಿಗೆ ಸ್ವಸ್ಥಾನ ಪರಿಜ್ಞಾನ ಮೂಡಿಸಲು ಈ ಗ್ರಂಥ ಉಪಕಾರ ಮಾಡೀತು.

ಕು.ಶಿ. ಹರಿದಾಸಭಟ್ಟ (ಉದಯವಾಣಿ - ೨೬ ನವೆಂಬರ್ ೧೯೯೪)

... ಈ ಪುಸ್ತಕದಲ್ಲಿ ನಿರೂಪಿತವಾದ ಇತಿಹಾಸ ಉಲ್ಲಾಸದಾಯಕವಾಗಿದೆ.  ಅದರ ವ್ಯವಸ್ಥೆಯಲ್ಲಿಯೇ ಒಂದು ಸೊಗಸಿದೆ; ವಿನ್ಯಾಸದಲ್ಲಿ ವೈವಿಧ್ಯವಿದೆ.  ಕೆಲವು ಇತಿಹಾಸ ನಿರೂಪಣೆಗಳಲ್ಲಿ ಕಣ್ಣುಪಟ್ಟಿ ಕಟ್ಟಿಕೊಂಡ ಏಕಮುಖತೆ ಇರುತ್ತದೆ.  ಅಕ್ಷರರ ಬರವಣಿಗೆ ಆ ತೆರನಾದುದಲ್ಲ.  ಇತಿಹಾಸವನ್ನು ಸಮಗ್ರ ದೃಷ್ಟಿಯಿಂದ ಪರಿಶೀಲಿಸುವ ಅವರ ಪ್ರಯತ್ನ ಆಕರ್ಷಕವಾಗಿದೆ... ರಂಗಭೂಮಿಯ ಇತಿಹಾಸವನ್ನು ಹೇಳುವಾಗ ಏನೆಲ್ಲ ಸಂಗತಿಗಳನ್ನು ಅಕ್ಷರರು ತಳಕು ಹಾಕುತ್ತಾರೆಂಬುದು ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ.

ಹಾ.ಮಾ. ನಾಯಕ (ಕರ್ಮವೀರ - ೧೮ ಡಿಸೆಂಬರ್ ೧೯೯೪)

Additional information

Number of pages

416

Year of Publication

2018

Author

ಅಕ್ಷರ ಕೆ.ವಿ.

Reviews

There are no reviews yet.

Be the first to review “ರಂಗಪ್ರಪಂಚ”

Your email address will not be published. Required fields are marked *