ಚೆರ್ರಿ ತೋಪು

₹65.00

SKU: 19 Category:

‘ಚೆರ್ರಿ ತೋಪು’ ನಾಟಕದ ಕಥೆ ಆ ಕಾಲದ ರಷಿಯಾದ -- ಮತ್ತು ವಿಶಾಲವಾಗಿ ಇಪ್ಪತ್ತನೆಯ ಶತಮಾನದ ಆರಂಭಕಾಲದ ಪಾಶ್ಚಿಮಾತ್ಯ ಜಗತ್ತಿನ -- ಚರಿತ್ರೆಯ ಗತಿಯನ್ನೇ ನಿರೂಪಿಸುವಂಥದು; ಬಂಡವಾಳಶಾಹಿ ಯುಗದ ಆರಂಭದ ಲೋಕವೊಂದನ್ನು ಕಾಣಿಸುವಂಥದು. ಈ ನಾಟಕದಲ್ಲಿ, ಸಾಲಕ್ಕೆ ಆಧಾರವಾಗಿರುವ ಒಂದು ಜಮೀನ್ದಾರೀ ಕುಟುಂಬದ ಚೆರ್ರಿ ತೋಟ ಹರಾಜಿಗೆ ಬಂದಿದೆ. ಅದನ್ನು ನಿವೇಶನಗಳಾಗಿ ಮಾರ್ಪಡಿಸಿ ಮಾರಿದರೆ ಸಾಲ ತೀರುತ್ತದೆ. ಆದರೆ ಆ ತೋಟದೊಂದಿಗೆ ಭಾವನಾತ್ಮಕ ಸಂಬಂಧವಿಟ್ಟುಕೊಂಡಿರುವ ಒಡತಿ ರೆನೆವಸ್ಕಾಯಾ ಹಾಗೆ ಮಾಡಲು ಒಪ್ಪುವುದಿಲ್ಲ. ಅತ್ತ, ಹರಾಜೂ ನಿಲ್ಲುವುದಿಲ್ಲ. ಈ ಮನೆಯಲ್ಲಿ ಒಕ್ಕಲಾಗಿದ್ದು ಈಗ ಹಣವಂತನಾಗಿರುವ ಲೋಪಾಹಿನ್‌ನೇ ತೋಟವನ್ನು ಕೊಳ್ಳುತ್ತಾನೆ. ಚೆರ್ರಿಮರಗಳನ್ನು ಕಡಿದು ಉರುಳಿಸುತ್ತಿರುವ ಶಬ್ದದ ಹಿನ್ನೆಲೆಯಲ್ಲಿ ಈ ಕುಟುಂಬ ಮನೆಯನ್ನು ಬಿಟ್ಟು ಹೊರಡುವಲ್ಲಿಗೆ ಈ ನಾಟಕ ಮುಗಿಯುತ್ತದೆ. ವಿಶೇಷವಾದ ನಾಟಕೀಯತೆಯೇನೂ ಇಲ್ಲದ ಈ ಕಥೆಯನ್ನು ಚೆಕಾವ್ ನಿರೂಪಿಸುವ ರೀತಿಯಿಂದಲೇ ಈ ಕೃತಿಯು ಎಲ್ಲ ಕಾಲಕ್ಕೂ ಸಲ್ಲುವ ಮಾನವವ್ಯಾಪಾರಗಳ ಒಂದು ದರ್ಶನವಾಗಿಯೂ ಪರಿವರ್ತಿತವಾಗುತ್ತದೆ.

Additional information

Number of pages

80

Year of Publication

2010

Author

ಅಕ್ಷರ ಕೆ.ವಿ.

eBook

https://play.google.com/store/books/details/Akshara_K_V_Cherry_Topu?id=CQv6DwAAQBAJ

Reviews

There are no reviews yet.

Be the first to review “ಚೆರ್ರಿ ತೋಪು”

Your email address will not be published. Required fields are marked *