ರಕ್ತ ದೇಹದಿಂದ ಚಿಮ್ಮಿದ ತಕ್ಷಣವೇ ಇನ್ನೂ ಬೆಚ್ಚಗಿರುವಾಗಲೇ ರಕ್ತವನ್ನು ದೃಷ್ಟಿಯಿಟ್ಟು ನೋಡಬೇಕು. ಆ ರಕ್ತದಲ್ಲಿ ಭವಿಷ್ಯ ಕಾಣುತ್ತೆ. ರಕ್ತದಲ್ಲಿ ಕಾಣದೇ ಇದ್ದುದು ಪರಸ್ಪರರ ಕಣ್ಣುಗಳ ಮಿಂಚಲ್ಲಿ...-- ಪ್ರೊ| ಡೇನಿಯೆಲ್ (ಪುಟ ೫೦)ಬಾಣ ಅರ್ಧ ಬರೆದಿದ್ದ ಕಾದಂಬರಿಯನ್ನು ಅವನ ಮಗ ಭೂಷಣ ಮುಂದುವರೆಸಿದನಂತೆ. ಮಾಸ್ತಿಯವರ ಅಲಿಖಿತ ಕತೆಗಳನ್ನು ಸತ್ಯನಾರಾಯಣ ಈಗ ಬರೆಯುತ್ತಿದ್ದಾರೇನೋ ಅನ್ನಿಸುತ್ತದೆ. ಇಲ್ಲಿಯ ಕತೆಗಳು ಪ್ರಗತಿಯ ಧಾವಂತದಲ್ಲಿರುವನಮ್ಮ ಕಾಲದ, ಸಮಾಜದ ಬಿಕ್ಕಟ್ಟುಗಳನ್ನು ಸೂಕ್ಷ್ಮವಾಗಿ ಗಮನಿಸಿ ವ್ಯಾಖ್ಯಾನಿಸುತ್ತವೆ.-- ಮುರಳೀಧರ ಉಪಾಧ್ಯ ಹಿರಿಯಡಕಸತ್ಯನಾರಾಯಣರ ಕಣ್ಣ ಕನ್ನಡಿಯಲ್ಲಿ ಹೊಳೆದ ಬಿಂಬಗಳು ಹಲವಾರು. ವರ್ತಮಾನದ ಬದುಕಿನ ಕಟು ವಾಸ್ತವತೆಯಅರಿವಿನಿಂದ ಹುಟ್ಟಿಕೊಂಡ ಗಾಢವಾದ ವಿಷಾದ ಹಾಗೂ ಅದರ ಮಧ್ಯೆಯೂ ಮೊಳಕೆಯೊಡೆಯುತ್ತಿರುವ ಜೈವಿಕ ಚಲನಶೀಲ ಸಂಬಂಧಗಳ ಬಗೆಗಿನ ಆಶಾವಾದ ಇವರ ಕತೆಗಳ ಪ್ರಧಾನ ಸಾಧನೆಯಾಗಿದೆ.-- ಡಾ| ಕೆ. ರಘುನಾಥ್ತಮ್ಮ ವಸ್ತು, ಚಿಂತನೆಗಳ ಬಹುರೂಪತೆ ಹಾಗೂ ಕಥಾಶೋಧದ ನಿಷ್ಠೆ -- ಇವುಗಳ ಮೂಲಕ ಸತ್ಯನಾರಾಯಣರ ಕತೆಗಳು ವಿಭಿನ್ನ ಕಾಲ-ಸನ್ನಿವೇಶಗಳಲ್ಲಿ ಹಲವು ಬಗೆಯ ಓದಿಗೆ ನಮ್ಮನ್ನು ಪ್ರಚೋದಿಸಬಲ್ಲ ಶಕ್ತಿ ಪಡೆದಿವೆ. ಕತೆಗಳನ್ನು ಹೇಳುವ ಮೂಲಕ ಜೀವನದರ್ಶನ ಪಡೆಯುವ ಜರೂರಿನಲ್ಲಿ ಇವರು ಬರೆಯುತ್ತಿದ್ದಾರೆ.-- ಕೆ.ಫಣಿರಾಜ್ (ಮುನ್ನುಡಿಯಲ್ಲಿ)ಇವು ಈವತ್ತಿನ ತಹತಹದ ಕತೆಗಳು.
-ಡಿ.ಎಸ್. ನಾಗಭೂಷಣ
Additional information
| Number of pages | 160 |
|---|---|
| Year of Publication | 2010 |
| Author | ಕೆ. ಸತ್ಯನಾರಾಯಣ |





Reviews
There are no reviews yet.